Tuesday, May 20, 2008

Gubbachchi Goodu .....matthu alli bachchitta mutthugalu

ಮನೇಲಿ ಕಂಪ್ಯೂಟರ್ ಬಂದು ತುಂಬ ದಿನಾನೆ ಆದರು , ಬರೆಯೋ ಈ ನನ್ನ ಕೈಗಳಿಗೆ ಬಿಡುವಿದ್ದ
ಹಾಗೆ ಇರಲಿಲ್ಲ. "E" ಲೋಕದ ತುಂಬ ನನ್ನ ಪ್ರಯಾಣ ಇನ್ನೂ ಸಾಗುತ್ತಲೇ ಇತ್ತು, Actuallyಇನ್ನೂ ಸಾಗುತ್ತಲೇ ಇದೆ . ಈ ವಿಸ್ಮಯಕಾರಿ ಲೋಕ ತನ್ನ ಎದೆ ಗೂಡಲ್ಲಿ ಇನ್ನು ಏನೇನು ಬಚ್ಚಿತ್ತು
ಕೊಂಡಿದೆಯೋ ಎಂದು ಹುಡುಕುವ ಪ್ರಯತ್ನದಲ್ಲಿರುವಾಗಲೇ ನನ್ನ ಬ್ಲಾಗ್ ಶುರು ಮಾಡಿ ಬಿಟ್ಟೆ, ಏನು ಬರೆಯಲಿ .....? .
ಮೊದಲೇ ಹೇಳಿದಂತೆ , ಇದು ನನ್ನ ಗೂಡು , ನನ್ನ ಪ್ರಪಂಚ , ನಂಗೆ ಅನಿಸದನ್ನೆಲ್ಲ ಅಭಿವ್ಯಕ್ತಿಸುವ ಒಂದು ರಂಗಮಂಚ. ನನಗೆ ತೋಚಿದ್ದು , ನನ್ನನ್ನು ಯೋಚಿಸಲು ಪ್ರೇರೇಪಿಸಿದ್ದು , ನನ್ನ ಮನಸ್ಸಿಗೆ ಮುದ ನೀಡಿದ್ದು ಎಲ್ಲವೂ ಇಲ್ಲಿನ ವಸ್ತುವಾಗುತ್ಥೆ. ಬನ್ನಿ ನನ್ನ ಜೊತೆ ಪ್ರಪಂಚವನ್ನು ಗುಬ್ಬಚ್ಚಿ'ಯ ಕಂಗಳಿಂದ ನೋಡೋಣ . ಪ್ರಯಾಣ ಸುಖವಾಗಿರಲಿ. ಹಾ ! ಹಾಗೆ , ಪ್ರಯಾಣದಲ್ಲಿ ದಣಿದವರಿಗೆ ನನ್ನ ಗೂಡು ಸುಖದ ಸೋಪಾನವಗಲಿಕ್ಕು ರೆಡಿ.

- ಇಂತಿ ನಿಮ್ಮ ಪ್ರೀತಿಯ,
ಹೇಮಾ

3 comments:

Sree said...

ಮೊದಲ ಚಿಲಿಪಿಲಿ ಚೆನ್ನಾಗಿದೆ ಹೇಮಕ್ಕ, ಹಿಂಗೇ ಮುಂದುವರೆಸಿ!:)

Sumana said...

BengaLurinalli gubbacchigaLe maayavaagtaa irovaaga, hemakkana gUDu nODi, chilipili kELi tumbaa khushi aaytu :) chilipili haaDu sadaa bartaa irali :)

bhadra said...

nammooralli maatra bahaLa gubbaccigaLive - prati dina beLagge 6kkE namma maneya baalkaniyalli haakuva kaaLigaagi kaayuttiruttave

aadare illiruva gubbacci aa gubbacciyaMte mookiyalla - ciMtanegaLa bhaMDaravannE Odugara muMde udurisuva, hasida managaLannu taNisuva suMdara lOka

oLLeyadaagali

gurudEva dayaa karo deena jane