ಸುಮಾರು ದಿನಗಳಾಗಿದ್ದವು ನಾನು ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದ ದರ್ಶನ ಪಡೆದು. ನೆನ್ನೆ ಸುರಿಯುತ್ತಿರುವ ಮಳೆಯಲ್ಲಿ ಅಲ್ಲಿಗೆ ಹೋಗಬೇಕಾಗಿ ಬಂತು. ಜಡಿ ಮಳೆ ಜೊತೆಗೆ ಟ್ರಾಫಿಕ್ ಜಾಮ್. ಆಹಾ! ಎಂಥ ಚಿತ್ರಾನ್ನದ ಫಜೀತಿ ಅಂದು ಕೊಂಡಿರೆ?. ಹಮ್... ಅಂಥ ಸೀನ್ ಇಲ್ಲ ಬಿಡಿ.
ಕೆ. ಜಿ . ರೋಡ್'ನ ಆ ಸರ್ಕಲ್, ಆ theatre'ಗಳು , ದೊಡ್ಡ ಪೋಸ್ಟರ್'ಗಳು.....ಮಳೆ'ಗು ಅಂಜದ ಜನಸಂದಣಿ. ಸಕ್ಕತ್ ಮಜಾ ಕೊಡ್ತು....ಮೇಲಾಗಿ, ಅಲ್ಲಿನ ಒಂದೊಂದು ಗಲ್ಲಿಯು ... ಬೇರೆಯದೇ ಪ್ರಪಂಚ ಅನ್ನಿಸ್ತಿತ್ತು. ಪೆಟ್ರೋಲ್ ಉಳಿಸುವ ಸಲುವಾಗಿ ಗಾಡಿಯನ್ನು ಸ್ಟಾರ್ಟ್ ಮಾಡದೇ ಕುಳಿತುಕೊಂಡೆ ಅಧು ಹೋದಷ್ಟು ದೂರ ಹೋಗಲಿ ಬಿಡು ಎಂಬಂತೆ ಆರಾಮಾಗಿ ಸ್ಕೂಟರ್ ಚಲಾಯಿಸುವ ಸವಾರ....ಅಕ್ಟೋಬರ್'ನಲ್ಲಿರುವ ಗಾಂಧಿ ಜಯಂತಿಗೆ ಜೂನ್'ನಿಂದಲೇ ೪೦% ಡಿಸ್ಕೌಂಟ್ ಕೊಡುವ ಖಾದಿ ಭಂಡಾರ್....ಹಾ...ಮೂಲೆಯಲ್ಲಿರುವ ರಂಗಮಂದಿರ , ಇಲ್ಲ ನಾಟಕದ ಥಿಯೇಟರ್ ಅಂದ್ರೆ ಸರೀನೇನೋ? ....ಆಹಾ, ಅದರ ಪೋಸ್ಟರ್ ನೋಡಬೇಕಿತ್ತು ?!....
ಇದೆಲ್ಲದರ್ ಮಧ್ಯೆ , ನಮ್ಮ ಹರಟೆ.....ಕಾರ್ನಲ್ಲಿದ್ದ ಎಫ್ ಎಂ ಜೊತೆ ಜಗ್ಗಾಟ.....
ಸಮಯ ಹೋಗಿದ್ಧು ಗೊತ್ತೆ ಆಗ್ಲಿಲ್ಲ. ನಮ್ಮಿಬ್ಬರ ಮಾತೆ ಸಾಕಿತ್ತು ಪ್ರಪಂಚ ಕಣ್ಣಿಗೆ ಕಂಡಿದ್ದು ಕಡಿಮೆ, ನಾನು ಮೇಲೆ ವಿವರಿಸದ್ದೆಲ್ಲ ಒಗ್ಗರಣೆ .
ಇದೆಲ್ಲದರ ಮಧ್ಯೆ....ಬೆಂಗಳೂರಿನ ಸಂಜೆ ಸೌಂದರ್ಯಕ್ಕೆ ಚಾರ್ ಚಾಂದ್ ಥರ ಬಂದಿರುವ " ಯು . ಬಿ . ಸಿಟಿ" ಕಣ್ಣಿಗೆ ಬಿತ್ತು. ಒಹ್ ! ಅದನ್ನ ನೋಡೋಕ್ಕೆ , ಗುಬ್ಬಚ್ಚಿ ಕಣ್ಣುಗಳು ಸಾಕಾಗಲಿಲ್ಲ.
I simple thrilled by the way Bangalore is changing day by day. Being a thorough bangalorean , I have seen her grow into multi faceted gorgeous young lady that she is today. Will definitely try to capture the real beauty of Bangalore as & when I can in my space.
Gubbachchi is all set to show you Bangalore, read on....
will be back tomorrow.
Till then, Have a good Life.
- Gubbachchi.
Sunday, June 1, 2008
Subscribe to:
Post Comments (Atom)
1 comment:
ಮೊನ್ನೆ ಬೆಂಗಳೂರಿಗೆ ಬಂದಾಗ ನೀವು ಹೇಳೀದ್ರಲ್ಲ ಆ ಖಾದಿ ಬಂಡಾರದಲ್ಲಿ urgent ಗೆ ಒಂದು ಕಂಬಳಿ ತಗೊಂಡು ಬಂದೆ......4% damage ರೀ......
Next time ಆ ಕಡೆ ಹೋದಾಗ ಒಂದು lesson ತಗೊಳ್ಳ್ರಿ...
ವಂದನೆಗಳು
Post a Comment